Marllin Maitra
ಸೋಶಿಯಲ್ ಮೀಡಿಯಾ ಸೆನ್ಸೇಷನ್ ಹಾಗೂ ಪ್ರಖ್ಯಾತ ಮಾಡೆಲ್ ಮರ್ಲಿನ್ ಮೈತ್ರಾ (Marllin Maitra) ತಮ್ಮ ಇತ್ತೀಚಿನ ಫೋಟೋಶೂಟ್ ಮೂಲಕ ಇಂಟರ್ನೆಟ್ನಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಸದಾ ವಿಭಿನ್ನ ಹಾಗೂ ಗ್ಲಾಮರಸ್ ಫೋಟೋಶೂಟ್ಗಳ ಮೂಲಕ ಗಮನ ಸೆಳೆಯುವ ಮರ್ಲಿನ್, ಈ ಬಾರಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ದಿಲ್ ಕದ್ದಿದ್ದಾರೆ.



ಚಿತ್ರ ಕೃಪೆ (Image Credit):Marllin Maitra Instagram
ವಿಶ್ವವಿಖ್ಯಾತ ನಟಿ ಮರ್ಲಿನ್ ಮನ್ರೋ ಅವರ ಪ್ರಸಿದ್ಧ ಉಲ್ಲೇಖವಾದ “I’m very definitely a woman and I enjoy it” (ನಾನು ಖಂಡಿತವಾಗಿಯೂ ಒಬ್ಬ ಮಹಿಳೆ ಮತ್ತು ಅದನ್ನು ನಾನು ಆನಂದಿಸುತ್ತೇನೆ) ಎಂಬ ಸಾಲುಗಳನ್ನು ಬರೆದುಕೊಂಡು ಮರ್ಲಿನ್ ಮೈತ್ರಾ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೆಟ್ಟಿಗರ ಮನಗೆದ್ದ ರೆಟ್ರೋ ಸ್ಟೈಲ್: ಈ ಫೋಟೋಶೂಟ್ಗಾಗಿ ಮರ್ಲಿನ್ ಪ್ರಖ್ಯಾತ ಬ್ರ್ಯಾಂಡ್ ‘Zara’ ಧರಿಸಿದ್ದು, ‘Christian Louboutin’ ಬ್ರ್ಯಾಂಡ್ನ ಹೀಲ್ಸ್ ಧರಿಸಿ ಮಜಬೂತ್ ಆಗಿ ಪೋಸ್ ನೀಡಿದ್ದಾರೆ. ಫೈಜಾನ್ ಖಾನ್ ಅವರ ಅದ್ಭುತ ಛಾಯಾಗ್ರಹಣ (Photography) ಹಾಗೂ ಅಂಕುಶ್ ಭಾರದ್ವಾಜ್ ಅವರ ಮೇಕಪ್ ಈ ಫೋಟೋಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. “ರೆಟ್ರೋ ಆದರೂ ಕ್ಲಾಸಿಕ್”, “ಯಾವತ್ತೂ ಸುಂದರವಾಗಿ ಕಾಣುವ ದಿವ್ಯ ಚೇತನ” ಎಂದೆಲ್ಲಾ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಮರ್ಲಿನ್ ಅವರ ಈ ಗ್ಲಾಮರಸ್ ರೆಟ್ರೋ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
ಮಾಡೆಲಿಂಗ್ ಲೋಕದ ಮಿನುಗು ತಾರೆ: ಕೇವಲ ಗ್ಲಾಮರ್ ಮಾತ್ರವಲ್ಲದೆ, ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮೂಲಕವೇ ಮರ್ಲಿನ್ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಫಾಲೋವರ್ಸ್ ಸಂಪಾದಿಸಿದ್ದಾರೆ. ಪ್ರತಿ ಬಾರಿಯೂ ಹೊಸ ಬಗೆಯ ಥೀಮ್ ಆಧಾರಿತ ಫೋಟೋಶೂಟ್ಗಳನ್ನು ಮಾಡುವ ಮೂಲಕ ಭಾರತೀಯ ಮಾಡೆಲಿಂಗ್ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಈ ರೆಟ್ರೋ ಕಲೆಕ್ಷನ್ ಚಿತ್ರಗಳು ಅವರ ಫ್ಯಾಷನ್ ಜರ್ನಿಯಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು, ಮುಂಬರುವ ದಿನಗಳಲ್ಲಿ ಅವರು ಸ್ಯಾಂಡಲ್ವುಡ್ ಅಥವಾ ಇತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆಯೇ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.










